Digital Politics (Kannada): ಸಾಂಕ್ರಾಮಿಕವು ಡಿಜಿಟಲ್ ರಾಜಕೀಯವನ್ನು ಹೇಗೆ ಪ್ರಭಾವಿಸುತ್ತದೆ

ಸಾಂಕ್ರಾಮಿಕವು ಸಾಮಾನ್ಯ ಜೀವನದ  ಅನೇಕ ಆಯಾಮಗಳನ್ನು ಅಸ್ತವ್ಯಸ್ತಗೊಳಿಸಿದೆ. ಇದು ಭಾರತ ಮಾಡುತ್ತಿರುವ ನಿಧಾನಗತಿಯ ಪ್ರಗತಿಯನ್ನು ಕೂಡ ಬುಡಮೇಲು ಮಾಡಬಹುದಾದ ಬೆದರಿಕೆಯನ್ನು ಒಡ್ಡಿದೆ. ಒಂದೇ ಏಟಿನಲ್ಲಿ, ಉತ್ತಮ ಜೀವನವನ್ನು ಅನುಭವಿಸುತ್ತಿದ್ದ ಎಷ್ಟೋ ಜನರು ತಾವು ಇನ್ನೆಂದೂ ತೆರಳುವುದಿಲ್ಲ ಎಂದು ಹಿಂದೆ ಬಿಟ್ಟಿದ್ದ ಜೀವನಸ್ಥಿತಿಗೆ ತಲುಪುವ ಸಂಭಾವ್ಯತೆಯನ್ನು ಎದುರಿಸುತ್ತಿದ್ದಾರೆ.

ಸಂಪತ್ತನ್ನು ಅರಸಿ ನಗರಗಳಿಗೆ ಬಂದಿಳಿದಿದ್ದ  ವಲಸಿಗರು ಈಗ ಮತ್ತೆ ತಮ್ಮ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಉದ್ಯೋಗ ಖಾತರಿ ಯೋಜನೆಯ) (MGNREGA) ಯಡಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಸೇವಾ ವಲಯದಾದ್ಯಂತ  ಜೀವನೋಪಾಯಗಳಿಗೆ ಅಡ್ಡಿಯೊದಗಿದೆ —ಏಕೆಂದರೆ ಸೇವೆಗಳನ್ನು ಸಂಗ್ರಹ ಮಾಡಲು ಅಥವಾ ಕೆಲ ಸಮಯದ ನಂತರ ಬಳಸಲು  ಸಾಧ್ಯವಿಲ್ಲ. ಈ ತರಂಗಗಳು ಅನಿವಾರ್ಯವಾಗಿ ರಾಜಕೀಯ ರಂಗದಲ್ಲೂ ಹರಿಯುತ್ತವೆ.

ರಾಜಕೀಯ, ಸ್ವಭಾವತಃ, ಒಂದು ಭಾವನಾತ್ಮಕ ಪ್ರಕ್ರಿಯೆ— ಸಂಪರ್ಕಾನುಭವದ ಕ್ರೀಡೆ. ರಾಜಕಾರಣಿಗಳು “ಮಾಡುವವರು”—ಅವರು ಜನರನ್ನು ಭೇಟಿ ಮಾಡುವುದು, ಸಣ್ಣ ಸಣ್ಣ ಸಮಾರಂಭಗಳಿಂದ  ದೊಡ್ಡ ಮೆರವಣಿಗೆಗಳವರೆಗೆ ಹಾಜರಾಗುವುದು ಮತ್ತು ದಿನನಿತ್ಯ ಜನರನ್ನು ಭೇಟಿಮಾಡುವ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ. ಅವರು ಜನರ ಮಧ್ಯೆ ಕಾಣಿಸಿಕೊಳ್ಳುತ್ತಿರಬೇಕು. ಅವರಿಗೆ, ಜನರೊಂದಿಗೆ ಪರಸ್ಪರ ಸಮಾಲೋಚನೆ ಮತ್ತು ಪ್ರತಿಕ್ರಿಯೆ ಶಕ್ತಿವರ್ಧಕ.

ಇದೆಲ್ಲವನ್ನೂ ಬದಲಾಯಿಸಲು ಈ ಸಾಂಕ್ರಾಮಿಕ ಏನು  ಮಾಡಿದೆ. ರಾಜಕಾರಣಿಗಳಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಂದರೆ ಜನರೊಂದಿಗೆ ನೇರ ಸಂಪರ್ಕ ಹೆಚ್ಚು ಸೀಮಿತಗೊಳ್ಳುತ್ತದೆ. ಈಗ ದೊಡ್ಡ ದೊಡ್ಡ ಜನಸಮಾವೇಶಗಳ ಪ್ರಶ್ನೆಯೇ ಇಲ್ಲ.

ಈಗ ಹೊರ ಹೋಗುವ ಮತ್ತು ಜನರೊಂದಿಗೆ ಬೆರೆಯುವ ಪ್ರತಿ ನಿರ್ಧಾರವನ್ನು ಅಪಾಯ ಮೌಲ್ಯಮಾಪನ ಮಾಡಿದ ನಂತರ ತೆಗೆದುಕೊಳ್ಳಬೇಕಾಗುತ್ತದೆ.

ಚುನಾವಣೆ ಹತ್ತಿರದಲ್ಲಿದ್ದರೆ ಸವಾಲುಗಳು ಹೆಚ್ಚುತ್ತವೆ. ಒಂದು ಸಾಂಕ್ರಾಮಿಕದ ಸಮಯದಲ್ಲಿ ಪ್ರಚಾರ ಕಾರ್ಯ ಹೇಗೆ ನಡೆಯುತ್ತದೆ?  ಒಂದು ಮುಕ್ತ ಪ್ರದೇಶದಲ್ಲಿ ಸಾವಿರಾರು ಜನರ ಅದೇ ಉತ್ಸಾಹ ಹಾಗೂ ಒಕ್ಕೊರಲಿನಿಂದ ಹಾಕುವ ಜೈಕಾರಗಳಿಗೆ ಒಂದು ಏಕೈಕ ಮೊಬೈಲ್ ಸ್ಕ್ರೀನ್ ಉತ್ತರವಾಗುತ್ತದೆಯೇ?

ಈ ಹಿನ್ನೆಲೆಯಲ್ಲಿ, ಹೊಸ ಸಾಂಕ್ರಾಮಿಕೋತ್ತರ ರಾಜಕೀಯ ರೀತಿ ನೀತಿ ಹೇಗಿರಬಹುದು? ಪ್ರಥಮ ಡಿಜಿಟಲ್-ಮತದಾರನಿಂದ ರಾಜಕಾರಿಣಿಗಳಿಗೆ ಮತ್ತು ಅವರ ಪಕ್ಷಗಳ ಮೇಲೆ ಉಂಟಾಗುವ ಪರಿಣಾಮವೇನು?  ಈಗಾಗಲೇ ಉತ್ತಂಗದಲ್ಲಿರುವವರು ಇನ್ನೂ ಮೇಲೇರುತ್ತಾರೆಯೇ, ಅಥವಾ ಇದು ಹೊಸ ಸವಾಲುಗಳನ್ನು ಸೃಷ್ಟಿಸುತ್ತದೆಯೇ?

ಪ್ರಾರಂಭಿಕವಾಗಿ, ಕಳೆದ ದಶಕದಲ್ಲಿ ರಾಜಕೀಯ ಹೇಗೆ ಬದಲಾವಣೆ ಹೊಂದಿದೆ ಎಂಬುದನ್ನು ನಾವು ನೋಡೋಣ – ಡಿಜಿಟಲ್ ಅಂಶಗಳಲ್ಲಿ.

ತಂತ್ರಜ್ಞಾನದ ಉದಯ

2009 ಚುನಾವಣೆಗಳಲ್ಲಿ ಎಸ್‍ಎಮ್‍ಎಸ್ ಮತ್ತು ಧ್ವನಿ ಕರೆ ವಿದ್ಯಮಾನಗಳ ಬಳಕೆ ವ್ಯಾಪಕವಾಗಿ ನಡೆಯಿತು. ಆದರೆ ಬಹುತೇಕ, ರಾಜಕೀಯ ಇನ್ನೂ ಆಫ್‍ಲೈನ್ ರೂಪದಲ್ಲಿಯೇ ಇತ್ತು – ದೊಡ್ಡ ದೊಡ್ಡ ಮೆರವಣಿಗೆಗೆಳು, ಶಕ್ತಿಪ್ರದರ್ಶನಗಳು, ಸಾಂಪ್ರದಾಯಿಕ ಮಾಧ್ಯಮ ಮತ್ತು ಅಬ್ಬರದ ಪ್ರಚಾರಗಳು.

2014ರ ಹೊತ್ತಿಗೆ ಸಾಮಾಜಿಕ ಮಾಧ್ಯಮದ ಅಳವಡಿಕೆ ಬೆಳೆದುನಿಂತಿತ್ತು. ಪ್ರಚಾರಕರಿಗೆ ಫೇಸ್‍ಬುಕ್ ಅತಿಮುಖ್ಯ ಭಾಗವಾಯಿತು. ಮಾಹಿತಿ ತನ್ನ ಪಾತ್ರವನ್ನು ವಹಿಸಲು ಪ್ರಾರಂಭಿಸಿತ್ತು – ಅನುಕೂಲಕರ ಫಲಿತಾಂಶಕ್ಕಾಗಿ ಯಾವ ಸ್ಥಾನಗಳನ್ನು, ಮತಗಟ್ಟೆಗಳನ್ನು ಮತ್ತು ಮತದಾರರನ್ನು ಗುರುತಿಸಬೇಕು. (ಸತ್ಯಪ್ರಕಟಣೆ: NitiCentral ಮುಂತಾದ ವೇದಿಕಗಳ ಮೂಲಕ ನಾನು ಈ ಚುನಾವಣೆಯಲ್ಲಿ ಒಬ್ಬ ಪಾತ್ರದಾರನಾಗಿದ್ದೆನು.)

2019ರ ಚುನಾವಣೆ ವಾಟ್ಸ್‌ಅಪ್, ಟ್ವೀಟ್ಟರ್ ಮತ್ತು ಫೇಸ್‍ಬುಕ್ ಮುಂತಾದವುಗಳ ವ್ಯಾಪಕ ಬಳಕೆಯಿಂದ ಡಿಜಿಟಲ್ ಆಧಾರಿತ ಪ್ರಚಾರ ಒಂದು ಹಂತ ಮೇಲಕ್ಕೆ ಏರಿತು. ಇದು ಭಾರತದ ಮೊದಲ “ಸಾಮಾಜಿಕ ಮಾಧ್ಯಮ ಚುನಾವಣೆ”ಯಾಗಿತ್ತು. ಬಿಜೆಪಿ Namo app ಹೊಂದಿದ್ದರೆ, ಕಾಂಗ್ರೆಸ್ Shakti app ಬಳಸಿತ್ತು. ಮಧ್ಯವರ್ತಿಗಳನ್ನು (ಪಕ್ಷದ ಕಾರ್ಯಕರ್ತರು ಮತ್ತು ಪ್ರೇರಿತ ಸ್ವಯಂಸೇವಕರು) ಸಶಕ್ತರನ್ನಾಗಿ ಮಾಡುವುದು ಮೂಲ ಉದ್ದೇಶವಾಗಿತ್ತು, ಮತದಾರರಲ್ಲಿ ಆಯ್ದ ಬೆಂಬಲಿಗರಿಗೆ ಸಂದೇಶವನ್ನು ತಲುಪಿಸುವ  ಕಾರ್ಯ ಇವರದಾಗಿತ್ತು.

ಮತದಾರರನ್ನು ಮೂರು ವರ್ಗಗಳಾಗಿ ವಿಭಾಗಿಸಬಹುದು: ನಿಷ್ಠಾವಂತರು (ಅಥವಾ ಬದ್ಧ ಮತದಾರರು), ಯಾವ ಪಂಥಕ್ಕೂ ಸೇರದಿರುವವರು (ಅಥವಾ ಸ್ವಿಂಗ್ ಮತದಾರರು) ಮತ್ತು ಮತದಾರರಲ್ಲದವರು. ಇದರ ಪ್ರಕಾರ, ಈ ಮೂರು ಬಕೆಟ್‍ಗಳಲ್ಲಿ ಪ್ರತಿಯೊಂದೂ ಮೂರನೇ ಒಂದು ಭಾಗದ ಮತದಾರರನ್ನು ಹೊಂದಿದ್ದಿತು.  2019 ರ ಲೋಕಸಭಾ ಚುನಾವಣೆಯಲ್ಲಿ, ಸುಮಾರು 27 ಕೋಟಿ ಮತದಾರರು ಮತದಾನ ಮಾಡಲಿಲ್ಲ. ಲೋಕನೀತಿಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಮತದಾನ ಮಾಡಿದವರಲ್ಲಿ ಸುಮಾರು ಅರ್ಧದಷ್ಟು ಮತದಾರರು ಪ್ರಚಾರದ ಸಮಯದಲ್ಲಿ ಅಥವಾ ಮತದಾನ ಮಾಡುವುದಕ್ಕೆ ಕೆಲವು ದಿನಗಳು ಅಥವಾ ಗಂಟೆಗಳು ಮುಂಚೆ ತಮ್ಮ ಮತ ಆದ್ಯತೆಯನ್ನು ನಿರ್ಧರಿಸಿದರು. ಇನ್ನು ಉಳಿದವರು ನಿಷ್ಠಾವಂತರು – ಇವರಿಗೆ ಅಭ್ಯರ್ಥಿ ಮುಖ್ಯವಲ್ಲ; ಪಕ್ಷದ ಚಿಹ್ನೆ ಮುಖ್ಯ.

ಹಾಗಾಗಿ, ಒಟ್ಟು 90 ಕೋಟಿ ಮತದಾರರಲ್ಲಿ ನಮಗೆ 30-30-30 ವಿಭಜನೆ ದೊರೆಯುತ್ತದೆ: 30 ಕೋಟಿ ನಿಷ್ಠಾವಂತರು ತಮ್ಮ ಇಷ್ಟವಾದ ಪಕ್ಷದ ಚಿಹ್ನೆಗೆ ಮತದಾನ ಮಾಡಿದವರು, ಯಾರಿಗೆ ಮತ ನೀಡಬೇಕು ಎಂದು ಚುನಾವಣೆಯ ದಿನದವರೆಗೂ ಕಾಯುವ ಯಾವ ಪಕ್ಷಕ್ಕೂ ನಿಷ್ಠೆಯನ್ನು ಹೊಂದಿಲ್ಲದ 30 ಕೋಟಿ ಮತದಾರರು (NA), ಮತ್ತು ಮತದಾನದಿಂದ ತಪ್ಪಿಸಿಕೊಳ್ಳುವ  30 ಕೋಟಿ ಮತದಾರರಲ್ಲದವರು (NV).

ರಾಜಕಾರಣಿಗಳು ಎದುರಿಸಬೇಕಾದ ಪ್ರಮುಖ ಸವಾಲು ಎಂದರೆ NA ಮತ್ತು NV ಭಾಗಗಳನ್ನು ಮನವೊಲಿಸುವುದು.  ಚುನಾವಣೆಯ ಮೇಲೆ ಪ್ರಭಾವ ಬೀರಬಹುದಾದ  NAಗಳ ಬಗ್ಗೆ ಆಲೋಚಿಸೋಣ – ಇವರು 2019ರಲ್ಲಿ ಬಿಜೆಪಿಗೆ ಅಸಾಮಾನ್ಯ ವಿಜಯವನ್ನು ತಂದುಕೊಟ್ಟರು (2019ರಲ್ಲಿ  ಬಿಜೆಪಿ 50%ಗೂ ಹೆಚ್ಚು ಮತ ಪಾಲಿನೊಂದಿಗೆ 303ರಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿತು, ಇದು 1984ರಲ್ಲಿ ಕಾಂಗ್ರೆಸ್‍ನ ಸಾಧನೆಗಿಂತ ಉತ್ತಮವಾಗಿತ್ತು.)

NA ಮತದಾರರು ವಿಶೇಷವಾಗಿ ನಿರ್ಣಾಯಕ ಏಕೆಂದರೆ ಅವರ ಮನವೊಲಿಕೆಯ ಅಗತ್ಯವಿದೆ. ಹವಾ ನಿರ್ಣಾಯಕವಾಗಿದೆ – ಈ ಹವಾ, ಸಂಭವಿಸುವ ಹಲವು ವಿದ್ಯಮಾನಗಳ ಮೂಲಕ ಸೃಷ್ಟಿಸಲಾಗುತ್ತದೆ. ಸ್ವಲ್ಪ ಸದ್ದಡಗಿದ ಸಾಂಕ್ರಾಮಿಕ-ಸಮಯದಲ್ಲಿ ಈ ಮತದಾರರ ಮನವೊಲಿಸುವುದು ಹೇಗೆ ಎಂಬುದು ಬಹುದೊಡ್ಡ ಪ್ರಶ್ನೆ.

NV ವರ್ಗ ಕೂಡ ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ – ಅವರು ತಮ್ಮ ಮನಸ್ಸನ್ನು ಬದಲಾಯಿಸಿದರೆ ಮತ್ತು ಮತದಾನಕ್ಕೆ ಬಂದರೆ.   ಅವರ ವರ್ತನೆಯನ್ನು ಊಹಿಸುವುದು ತುಂಬಾ ಕಷ್ಟ ಹಾಗೂ ಅವರು ಕೆಲವು ಆಶ್ಚರ್ಯಗಳನ್ನು ಸೃಷ್ಟಿಸಬಹುದು. ಹಲವು ಜನ ವಲಸೆಗಾರರು ಈಗ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ – ಬಹುಶಃ ಅವರೆಲ್ಲರೂ ಅಲ್ಲಿ ಮತದಾರರೆಂದು ನೋಂದಾಯಿತರಾಗಿದ್ದಾರೆ. ಬಹುತೇಕ ಚುನಾವಣೆಗಳಲ್ಲಿ, ತುಂಬಾ ಕಡಿಮೆ ಜನರು ಮತದಾನಕ್ಕಾಗಿ ತಮ್ಮ ಊರುಗಳಿಗೆ ಹೋಗುವ ತೊಂದರೆ ತೆಗೆದುಕೊಳ್ಳುತ್ತಾರೆ. ಅವರೆಲ್ಲಾ ಈಗ ಮತ ಚಲಾಯಿಸಿದರೆ ಅವರು ಫಲಿತಾಂಶವನ್ನು ಯಾವ ಕಡೆಗೆ ಸೆಳೆಯಬಹುದು? ಅದೇ ಯುವಜನರಿಗೂ ಅನ್ವಯಿಸುತ್ತದೆ – ಇವರಲ್ಲಿ ಅನೇಕರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದಾರೆ ಹಾಗೂ ಅವರು ಮತದಾರರಾಗಿ ನೋಂದಾಯಿರುವ ಸಂಭವವಿದೆ.

ಪ್ರತಿ ಚುನಾವಣಾ ಪ್ರಚಾರದ ಮೂಲಮಂತ್ರ ಒಂದೇ ಆಗಿದೆ: ಗುರುತಿಸಿ, ನೋಂದಾಯಿಸಿ, ಮನವೊಲಿಸಿ ಮತ್ತು ಸೂಕ್ತ ಮತದಾರರನ್ನು ಮತಗಟ್ಟೆಗಳಿಗೆ ತನ್ನಿ. ಮಾಹಿತಿಯ ವಿಶ್ವ ಮತ್ತು ಡಿಜಿಟಲ್ ಏನು ಮಾಡುತ್ತದೆಂದರೆ ಗುರಿ ಪ್ರಕ್ರಿಯೆಗೆ ನಿಖರತೆಯನ್ನು ತರುತ್ತದೆ. ಇದೇ ಡಿಜಿಟಲ್ ತಂತ್ರಜ್ಞಾನ ಪ್ರಭಾವ ಬೀರುವ ಜಗತ್ತು ಮತ್ತು ಮುಂಬರುವ ತಿಂಗಳುಗಳಲ್ಲಿ ಹಾಗೂ ವರ್ಷಗಳಲ್ಲಿ ಇದು ಇನ್ನಷ್ಟು ರೂಪಾಂತರಗಳನ್ನು ತರುತ್ತದೆ.

ಡಿಜಿಟಲ್ ರಾಜಕಾರಣಿಗಳು

ಸಾಂಕ್ರಾಮಿಕ-ಸೋಂಕಿತ ಭಾರತದಲ್ಲಿ, ಒಂದು ಸ್ಮಾರ್ಟ್‌ಫೋನ್ ಇಲ್ಲದೆ  ಜೀವನ ಈಗ ಬಹುತೇಕ ಅಸಾಧ್ಯ. ರೈಲು ಹತ್ತಬೇಕೇ – ನಿಮಗೆ ಆರೋಗ್ಯ ಸೇತು app ಅಗತ್ಯ.  ಕಲಿಯಬೇಕೆ – ಶಾಲೆಗಳು ಈಗ ಆನ್‍ಲೈನ್‍ನಲ್ಲಿ. ಆಸ್ಪತ್ರೆ ಹಾಸಿಗೆಗಳು ಎಲ್ಲಿ ಲಭ್ಯವಿದೆ ಎಂದು ಚೆಕ್ ಮಾಡಿಕೊಳ್ಳಬೇಕೇ – app ನಿಮಗೆ ತಿಳಿಸುತ್ತದೆ. ಸ್ಟೋರ್‌ಗೆ ಭೇಟಿ ನೀಡುವ ಅಪಾಯವಿಲ್ಲದೆ ಏನನ್ನಾದರೂ ಆರ್ಡರ್ ಮಾಡಬೇಕೇ – ಅದಕ್ಕೊಂದು app ಇದೆ. ಸುಮ್ಮನೆ ಸ್ವಲ್ಪ ಕಾಲಹರಣ ಮಾಡಬೇಕೇ – ಅದಕ್ಕೂ ಹಲವು appಗಳಿವೆ.

ಕೆಲವು ವರ್ಷಗಳ ಹಿಂದೆ ಭಾರತ ಡಿಜಿಟಲ್ ಶಿಲಾಯುಗದಲ್ಲಿತ್ತು. ಜಿಯೋ ಬಿಡುಗಡೆ ಮತ್ತು ನಂತರದ ಬೆಲೆಯುದ್ಧ ಬಹುತೇಕ ಭಾರತೀಯ ಕುಟುಂಬಗಳಿಗೆ ಕೈಗೆಟುಕುವ ದರಗಳಲ್ಲಿ ಫೋನ್ ಮತ್ತು ಅಗ್ಗದ ಡಾಟಾ ವಿತರಣಾ  ಅವಕಾಶವನ್ನು ಕಲ್ಪಿಸಿತು. ಈ ಡಿಜಿಟಲ್ ಅಡಿಪಾಯವನ್ನು ರಾಜಕಾರಣಿಗಳು ಈಗ ಹತೋಟಿಗೆ ಪಡೆದು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ.

ಒಂದು ಮೂಲ ಮಟ್ಟದಲ್ಲಿ, ರಾಜಕಾರಣಿಗಳು ಐದು ಪ್ರಮುಖ ಕೆಲಸಗಳನ್ನು ಮಾಡಬೇಕು:  ಒಂದು ಕ್ರಮಾನುಗತ ಕಾರ್ಮಿಕರು ಮತ್ತು ಸ್ವಯಂಸೇವಕರನ್ನು ನಿರ್ವಹಿಸುವುದು; ತಮ್ಮ ಘಟಕಗಳ ಮತದಾರರ ಫೈಲ್ ತಯಾರಿಸುವುದು; ತಮ್ಮ ಸಂದೇಶವನ್ನು ರವಾನಿಸಲು ಅವರ ಬೆಂಬಲಿಗರೊಂದಿಗೆ (ನಿಷ್ಠಾವಂತರು ಮತ್ತು ಯಾವ ಪಕ್ಷಕ್ಕೂ ನಿಷ್ಟೆಯಿಲ್ಲದವರು) ಸಂವಹನ; ಅವರ ನೋವುಗಳು ಮತ್ತು ನಿರೀಕ್ಷೆಗಳ ಬಗ್ಗೆ ಮತದಾರರಿಂದ ಮರುಮಾಹಿತಿ ಪಡೆಯುವುದು; ಚುನಾವಣೆಯ ದಿನದಂದು  ಮತ ಚುನಾವಣೆಗಾಗಿ ಮನೆಯಿಂದ ಹೊರಡಿಸುವುದು.

ಡಿಜಿಟಲ್ ಈಗ ಈ ಪ್ರತಿಯೊಂದು ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅವರಿಗೆ ಸಹಾಯ ಮಾಡುತ್ತದೆ. ಜೊತೆ ಕಾರ್ಪೊರೇಟ್ ಜಗತ್ತಿನಲ್ಲಿ ಮತ್ತು ವ್ಯವಹಾರಗಳು ಗ್ರಾಹಕ ಸಂಬಂಧ ನಿರ್ವಹಣೆ  (CRM) ವ್ಯವಸ್ಥೆಗಳನ್ನು ಸೃಷ್ಟಿಸುವಲ್ಲಿ ಒಳಗೊಳ್ಳುವಿಕೆಯ ಮೇಲೆ ಗಮನಹರಿಸುವ ವಿಧಾನದೊಂದಿಗೆ ಇದು ಅನೇಕ ಸಮಾನಾಂತರಗಳನ್ನು ಹೊಂದಿದೆ . ರಾಜಕೀಯ ಮತ್ತು ವ್ಯಾಪಾರದ ನಡುವೆ ಇರುವ ಒಂದು ದೊಡ್ಡ ವ್ಯತ್ಯಾಸವೆಂದರೆ  ರಾಜಕೀಯದಲ್ಲಿ ಎರಡನೆಯವರಾಗಿ ಬರುವುದಕ್ಕೆ ಯಾವುದೇ ಬಹುಮಾನಗಳಿಲ್ಲ— ಏನು ತಪ್ಪಾಗಿದೆ ಎಂದು ಅರಿಯಲು ಮತ್ತು  ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಐದು ವರ್ಷಗಳು ಕಳೆಯಬೇಕಾಗುತ್ತದೆ.

ಈ “ವಿಜೇತ-ಎಲ್ಲವನ್ನೂ ಪಡೆದುಕೋ” ಎಂಬ ವಿಶ್ವದ ರಾಜಕೀಯದಲ್ಲಿ ಡಿಜಿಟಲ್ ಭಿನ್ನತೆಯನ್ನು ತರಲಿದೆ. ಮತದಾರರು ತಮ್ಮ ಇತರ ಚಟುವಟಿಕೆಗಳಿಗೆ ಈಗಾಗಲೇ  ಡಿಜಿಟಲ್‍ಗೆ ಹೋಗಿದ್ದಾರೆ —ಇದು ಈಗ ರಾಜಕಾರಣಿಗೆ  ಡಿಜಿಟಲ್-ಮೊದಲು ಆಗಬೇಕಾದ ಸಮಯ.

ಕಳೆದ ಕೆಲವು ತಿಂಗಳುಗಳಲ್ಲಿ “ಗ್ರಾಹಕರನ್ನು-ಎದುರಿಸಿ” ವ್ಯಾಪಾರಗಳಿಗೆ ಒದಗಿದ ಸ್ಥಿತಿಯು ಈ ಆಫ್‍ಲೈನ್‍ನಿಂದ-ಆನ್‍ಲೈನ್‍ಗೆ ಪರಿವರ್ತನೆಯು ಕನ್ನಡಿ ಹಿಡಿಯುತ್ತದೆ. ಹಲವು ವ್ಯಾಪಾರಗಳಿಗೆ ಇದು ಏಕಚಾನೆಲ್ ಆಗುವುದು ಕೂಡ ಅಲ್ಲ – ಅವರೆಲ್ಲಾ ಆನ್‍ಲೈನ್‍ನಲ್ಲೇ ಇರಬೇಕಾಗುತ್ತದೆ. ರಾಜಕಾರಣಿಗಳದೂ ಅದೇ ಕಥೆ. ಜಗತ್ತಿನಲ್ಲಿ ಜಾಗರೂಕ ನೇರ ಸಂಪರ್ಕ, ಇಂಟರ್ಫೇಸ್ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಮತದಾರರು ಡಿಜಿಟಲ್ ಆಗಲು ಬದಲಾವಣೆಗೊಳ್ಳಬೇಕಾಗುತ್ತದೆ.

ಒಂದು ಡೇಟಾಬೇಸ್, ಮೂರು appಗಳು

ರಾಜಕಾರಿಣಿಗಳು ತಮ್ಮ ಐದು ಕೆಲಸಗಳನ್ನು ಮಾಡಿಸಿಕೊಳ್ಳಲು ಅವರಿಗೆ ಒಂದು ಡೇಟಾಬೇಸ್, ಮೂರು appಗಳ ಅಗತ್ಯವಿದೆ. ಪ್ರಾರಂಭ ಬಿಂದು ಮತದಾರ ಡಾಟಾಬೇಸ್. ಅನೇಕ ರಾಜಕಾರಣಿಗಳು ಈಗಾಗಲೇ  ಈ ಕಳೆದ ಕೆಲವು ವರ್ಷಗಳಲ್ಲಿ ಇದನ್ನು ನಿರ್ಮಿಸಲು ಆರಂಭಿಸಿದ್ದಾರೆ. ಇದು ಈಗ ಎಲ್ಲಾ ಸಂವಹನ ಮತ್ತು ಪರಸ್ಪರ ಪ್ರತಿಕ್ರಿಯೆಗಳ ಕೇಂದ್ರವಾಗುತ್ತದೆ.

ಈ ಡೇಟಾಬೇಸ್ ಗ್ರಾಹಕ ದತ್ತಾಂಶ ವೇದಿಕೆ (ಸಿಡಿಪಿ)ಯ ರೀತಿಯಲ್ಲಿರುತ್ತದೆ, ಈ ಮಾದರಿಯನ್ನು ಗ್ರಾಹಕನನ್ನು-ಎದುರಿಸುವ ಬ್ರ್ಯಾಂಡ್‍ಗಳು ಅನೇಕ ವರ್ಷಗಳಿಂದ ಬಳಸುತ್ತಿವೆ. ಸಿಡಿಪಿಯ ಎಲ್ಲಾ ಗ್ರಾಹಕ ಮಾಹಿತಿಯನ್ನು ಒಂದು ಭಂಡಾರದೊಳಗೆ ಸಂಚಯಿಸುತ್ತದೆ. ಇದರಲ್ಲಿ ಗುರುತು ಒಳಗೊಂಡಿದೆ (ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ), ಜನಸಂಖ್ಯಾ ಮಾಹಿತಿ (ವಯಸ್ಸು, ಲಿಂಗ, ಸ್ಥಳ), ವರ್ತನೆಯ ಮಾಹಿತಿ (app ಅಥವಾ ವೆಬ್‍ಸೈಟ್‍ನಲ್ಲಿ ಮಾಡಲಾದ ಕ್ರಿಯೆಗಳು) ಮತ್ತು ವ್ಯಾವಹಾರಿಕ ಮಾಹಿತಿ (ಮಾಡಲಾದ ಎಲ್ಲಾ ಖರೀದಿ ವಿವರಗಳು). ಒಟ್ಟಿಗೆ ತೆಗೆದುಕೊಂಡಾಗ, ಸಿಡಿಪಿಯು ಪ್ರತಿ ಗ್ರಾಹಕನ ಒಂದು ಏಕೀಕೃತ ವೀಕ್ಷಣೆಯನ್ನು ಒದಗಿಸುತ್ತದೆ.

ರಾಜಕಾರಣಿಗಳಿಗೆ, ಸಿಡಿಪಿಯು ಮತದಾರನ ಕಡತದ ಸಮಾನ. ಪ್ರತಿ ಮತದಾರನಿಗೂ, ಎಲ್ಲಾ ಮಾಹಿತಿಯನ್ನು ತಾಳೆ ಮಾಡಿ ಒಂದು ಡೇಟಾಬೇಸ್ ಒಳಗೆ ಹಾಕಬೇಕಾದ ಅಗತ್ಯವಿದೆ— ಮತದಾರ ಗುರುತು ಚೀಟಿ, ಮೊಬೈಲ್ ಸಂಖ್ಯೆ, ನಿಷ್ಠೆ ಮಟ್ಟ ಮತ್ತು ಮತ ನೀಡಲು ಬರುವ ಸಾಧ್ಯತೆ. ಮತದಾರ ದಾಖಲೆಗಳ ಜೊತೆಗೆ, ಮತದಾನ ಇರುವ ಸ್ಥಳ ಮತ್ತು ಯಾವ ಯೋಜನೆಗಳಿಂದ ಅವನಿಗೆ ಪ್ರಯೋಜನ ಸಿಕ್ಕಿದೆ ಎಂಬ ಮಾಹಿತಿಯೂ ರಾಜಕಾರಿಣಿಗೆ ಅವಶ್ಯಕ. ಇದನ್ನು ತನ್ನ ಬಳಿ ಇಟ್ಟುಕೊಂಡು ರಾಜಕಾರಿಣಿಯು ಪ್ರತಿ ಮತದಾರನೊಂದಿಗೆ ಸಂವಹನವನ್ನು ವೈಯುಕ್ತೀಕೃತಗೊಳಿಸಬಹುದು – ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ನಡೆಸುವ ವ್ಯವಹಾರದ ರೀತಿಯಲ್ಲಿಯೇ.

ಒಮ್ಮೆ ಡೇಟಾಬೇಸ್ ಸೆಟ್ ಅಪ್ ಮಾಡಿದರೆ, ಡಿಜಿಟಲ್-ಅರಿವಿನ ರಾಜಕಾರಣಿಗೆ ಮಧ್ಯವರ್ತಿಗಳು ಅಂದರೆ ಕಾರ್ಯಕರ್ತರು ಮತ್ತು ಸ್ವಯಂಸೇವಕರ ನಿರ್ವಹಣೆಗೆ  ಒಂದು app ಅಗತ್ಯವಿದೆ. ಇದನ್ನು ಸಾಮಾನ್ಯವಾಗಿ ವಾಟ್ಸ್ ಅಪ್ ಮತ್ತು ಫೋನ್ ಮತ್ತು ವೈಯಕ್ತಿಕ ಸಂಪರ್ಕ ಮಿಶ್ರಣದ ಮೂಲಕ ಮಾಡಲಾಗುತ್ತದೆ. ಶ್ರೇಣಿಗಳನ್ನು ಸೃಷ್ಟಿಸುವ, ಕಾರ್ಯಗಳನ್ನು ಹಂಚುವ ಮತ್ತು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಒಂದು ಉತ್ತಮ ವ್ಯವಸ್ಥೆಗೆ ಅಪ್‍ಗ್ರೇಡ್ ಮಾಡುವ ಅಗತ್ಯವಿದೆ. ಕಾರ್ಪೊರೇಶನ್‍ಗಳು ಉದ್ಯೋಗಿಗಳ ಮೇಲ್ವಿಚಾರಣೆಯನ್ನು ನಡೆಸಲು ಹೊಸ appಗಳನ್ನು ಕಂಡುಹಿಡಿಯುತ್ತಿರುವಂತೆಯೇ, ರಾಜಕಾರಿಣಿಗಳಿಗೆ ಕೂಡ ತಮ್ಮ ಮುಂದಿನ ಮಟ್ಟಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಒಂದು appನ ಅಗತ್ಯವಿದೆ.

ಎರಡನೇ app ಮತದಾರ ಸಂವಹನ ಮತ್ತು ಒಳಗೊಳ್ಳುವಿಕೆ. ಮುಂದಿನ ಕೆಲವು ಸಮಯದಲ್ಲಿ ಬೃಹತ್ ಶಕ್ತಿ ಪ್ರದರ್ಶನ ಬಹುತೇಕ ಅಸಂಭವವೆನಿಸುವ ಈ ಪರಿಸ್ಥಿತಿಯಲ್ಲಿ, ರಾಜಕಾರಿಣಿಗಳಿಗೆ ತಮ್ಮ ಮುಖ, ಪಕ್ಷದ ಚಿಹ್ನೆ ಮತ್ತು ಸಂದೇಶವನ್ನು ಸಂಬಂಧಪಟ್ಟವರಿಗೆ ರವಾನಿಸಲು ಡಿಜಿಟಲ್ ಘಟನೆಗಳು ಮತ್ತು ಮೆರವಣಿಗೆಗಳ ಅಗತ್ಯವಿದೆ. Think Zoom ಶಕ್ತಿವರ್ಧಕಗಳ ಮೇಲೆ.

ಈ ಪ್ರಕ್ರಿಯೆಯಲ್ಲಿ, ರಾಜಕಾರಣಿಗಳು ಸಹ, ವ್ಯಕ್ತಿಗತ ಸಂಭಾಷಣೆಗಳು ದೂರವಾಗಿರುವುದರಿಂದ ಜನರು ಏನು ಆಲೋಚನೆ ಮಾಡುತ್ತಿದ್ದಾರೆ ಎಂಬ ಮರುಮಾಹಿತಿಯನ್ನು ಪಡೆಯಲು ಸಮೀಕ್ಷೆಗಳನ್ನು ನಡೆಸಬೇಕಾದ  ಅಗತ್ಯವಿದೆ. ಚಾಯ್ ಪೆ ಚರ್ಚಾ ಪ್ರಚಾರ ಉಪಕ್ರಮಗಳ ಹಾಗೆಯೇ ಸ್ಕ್ರೀನ್ ಸೆ ಚರ್ಚಾ ಮಾಡಬೇಕಾದ ಅಗತ್ಯವಿದೆ. ನಾವು ಈಗಾಗಲೇ ನೋಡಿದ ಆರಂಭಿಕ ಚಿಹ್ನೆಗಳು ಈ ವರ್ಷಾಂತ್ಯದಲ್ಲಿ ನಡೆಯಬಹುದಾದ  ಬಿಹಾರ್ ರಾಜ್ಯದ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಆರಂಭವಾಗಿರುವುದು ಕಂಡುಬರುತ್ತಿದೆ.

ಮೂರನೇ app ಮತಗಟ್ಟೆ ನಿರ್ವಹಣೆಗೆ ಅಗತ್ಯ. ಒಂದು ಮಾದರಿ ಲೋಕಸಭಾ ಕ್ಷೇತ್ರದಲ್ಲಿ 1500-2000 ಮತಗಟ್ಟೆಗಳಿರುತ್ತವೆ, ಹಾಗೆಯೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ 200-300 ಮತಗಟ್ಟೆಗಳಿರುತ್ತವೆ ಪ್ರತಿ ಮತಗಟ್ಟೆಯೂ ಸುಮಾರು ಒಂದು ಸಾವಿರ ಮತದಾರರನ್ನು (ಸುಮಾರು 250 ಮನೆಗಳು) ಹೊಂದಿರುತ್ತದೆ. ಮತದಾನ ದಿನದ ಸಮೀಪ, ಯಾವ ಮತದಾರರ ಮನವೊಲಿಸಬೇಕು ಮತ್ತು ಚುನಾವಣೆಯ ದಿನ ಮತದಾನಕ್ಕೆ ಕರೆತರಬೇಕು ಎಂಬ ಬಗ್ಗೆ ಮತಗಟ್ಟೆ ಕಾರ್ಯಕರ್ತರ ನಿರ್ವಹಣೆ ಮಾಡಬೇಕಾದ ಮತ್ತು ಅವರಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ.  ಮುಂಬರುವ ಬಿಹಾರ, ತಮಿಳುನಾಡು ಮತ್ತು ಬಂಗಾಳದ ವಿಧಾನಸಭೆ ಚುನಾವಣೆಗಳಲ್ಲಿ ಡಿಜಿಟಲ್ ಬೂತ್ ನಿರ್ವಹಣೆ ಹೇಗೆ  ಕೆಲಸಮಾಡುತ್ತದೆ ಎಂಬುದರ ಪರೀಕ್ಷೆ  ಆಗಲಿದೆ.

ಮತದಾರರ ಡೇಟಾಬೇಸ್‍ನೊಂದಿಗೆ ಮೂರು appಗಳನ್ನೂ ಒಟ್ಟಿಗೆ ತೆಗೆದುಕೊಂಡರೆ, ಕಾರ್ಯಕರ್ತರ ಸಮನ್ವಯ, ಮತದಾರರೊಂದಿಗೆ ದ್ವಿ-ವಿಧ ಸಂವಹನ, ಮತ್ತು ಮತಗಟ್ಟೆ ನಿರ್ವಹಣೆ ಮುಂಬರುವ ಕಾಲದಲ್ಲಿ ಡಿಜಿಟಲ್ ರಾಜಕಾರಣಕ್ಕೆ ಅಡಿಪಾಯ ಹಾಕುತ್ತದೆ.

ಸಂಕ್ಷೇಪಿಸುವುದಾದರೆ

ತೊಡಗಿಸಿಕೊಳ್ಳುವಿಕೆಯನ್ನು ಆಫ್‍ಲೈನ್‍ನಿಂದ ಆನ್‍ಲೈನ್‍ಗೆ ಬದಲಾಯಿಸುವುದರ ಜೊತೆಗೆ, ರಾಜಕಾರಣದಲ್ಲಿ ಸಾಂಕ್ರಾಮಿಕವು ಮೂರು ಇನ್ನಿತರ ಬದಲಾವಣೆಗಳನ್ನು ತರಲಿದೆ.

ಮೊದಲನೆಯದು, ಇದು ಇನ್ನೂ ಹೆಚ್ಚು ಯುವ ರಾಜಕಾರಿಣಿಗಳನ್ನು ಉತ್ತೇಜಿಸಬಹುದು. ವಯಸ್ಸಾದವರು ಈ ಸಾಂಕ್ರಾಮಿಕಕ್ಕೆ ಸುಲಭವಾಗಿ ತುತ್ತಾಗುವ ಸಂಭವವಿರುವುದರಿಂದ ವಯಸ್ಸಾದ ರಾಜಕಾರಿಣಿಗಳು ಹೊರಹೋಗಲು ಹಿಂದೇಟು ಹಾಕಬಹುದು – ಇದು ಈ ರೋಗಕ್ಕೆ ಔಷಧ ಸಿಗುವವರೆಗೂ ಮುಂದುವರಿಯಬಹುದು.

ಎರಡನೆಯದು, ಜನರು ಹೆಚ್ಚು ಆರ್ಥಿಕ ನೋವನ್ನು ಅನುಭವಿಸುತ್ತಿರುವುದರಿಂದ, ನಾಳಿನ ಉಜ್ವಲ ಭವಿಷ್ಯದ ಬಗ್ಗೆ ಕನಸನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಇಂದು ಹೆಚ್ಚು ಹಣವನ್ನು ಲಭ್ಯಗೊಳಿಸುವ ಪರಿಹಾರಗಳಿಗೆ ಹೆಚ್ಚಿನ ಅಂಗೀಕಾರವಿರುತ್ತದೆ. ಅರ್ಥಾತ್, ಇಂದು ಹಣದ ಭರವಸೆಯನ್ನು ಕೊಡುವ ರಾಜಕಾರಿಣಿಗಳು ಭವಿಷ್ಯದಲ್ಲಿ ಉಜ್ವಲ ಭವಿಷ್ಯವನ್ನು ತೋರಿಸುವವರಿಗಿಂತ ಹೆಚ್ಚು ಅಂಗೀಕೃತರಾಗುತ್ತಾರೆ.

ನಂತರ, ರಾಜಕಾರಿಣಿಗಳ ವಿರುದ್ಧ ಭಾವನಾತ್ಮಕ ಬದಲಾವಣೆಯ ಅಪಾಯ ಕೂಡ ಇದೆ. ಒಂದು ವೇಳೆ ಸಾಂಕ್ರಾಮಿಕದ ಹರಡುವಿಕೆ ಇದೇ ರೀತಿ ಮುಂದುವರಿದರೆ ಮತ್ತು ಲಾಕ್-ಅನ್‍ಲಾಕ್ ವಿದ್ಯಮಾನ ಮುಂದುವರಿದರೆ, ಕೋಪಗಳು ಏರುವ ಸಂಭವವಿದೆ. ಭಾರತೀಯರ ತಾಳ್ಮೆ ವಿಶಿಷ್ಟವಾದದ್ದಾದರೂ, ಅವರ ಸ್ಥಿತಿಯ ಬಗ್ಗೆ ಒಟ್ಟುಗೂಡಿರುವ ಕೋಪ ಯಾವುದೋ ಒಂದು ಹಂತದಲ್ಲಿ ಭುಗಿಲೇಳುವ ಸಾಧ್ಯತೆಯಿದೆ.

ಡಿಜಿಟಲ್‍ಗೆ ಪಾದಾರ್ಪಣ ಮಾಡಲು ರಾಜಕಾರಿಣಿಗಳು ಸಜ್ಜಾಗುತ್ತಿದ್ದರೂ ಕೂಡ ರಾಜಕೀಯ ಅಡ್ಡಿ ಆತಂಕಗಳನ್ನು ಸೃಷ್ಟಿಸಲು ಪೈಪೋಟಿದಾರರು ಹೊಸ ವೇದಿಕೆಗಳನ್ನು ಮತ್ತು ಮಾರುಕಟ್ಟೆ ಸ್ಥಳಗಳನ್ನು ನಿರ್ಮಿಸಬಹುದೇ?  ಭಾರತವನ್ನು ಒಂದು ಹೊಸ ಪಥದಲ್ಲಿ ನಡೆಸಲು ಮತ್ತು ಭಾರತೀಯರನ್ನು ಬಡತನದಲ್ಲಿಯೇ ಇರಿಸಿದ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ಒಂದು ಅವಕಾಶ ಎಂದಾದರೂ ಇದ್ದಿತೆಂದರೆ, ಅದಕ್ಕೆ ಇದೇ ಸಮಯ. ಡಿಜಿಟಲ್-ಅರಿವಿನ ರಾಜಕೀಯ ಉದ್ಯಮಿಗಳು ಕೇಳುತ್ತಿದ್ದಾರೆಯೇ?

This is a translation of the original essay written in English by Rajesh Jain for Mint (July 31, 2020). If you find any errors, please rajesh@nayidisha.com.